ಪ್ರಕಟಣೆ - ಏಪ್ರಿಲ್ 12 ಮತ್ತು 13 ಶನಿವಾರ - ಚೆನ್ನೈ ಆಶ್ರಮ ಕನ್ನಡ Retreat

ಆತ್ಮೀಯ ದಿವ್ಯಾತ್ಮರೆ  ಜೈ ಗುರು

ಏಪ್ರಿಲ್ 12 ಮತ್ತು 13 ಶನಿವಾರ ಮತ್ತು ಭಾನುವಾರದಂದು, ಕೆರೆ ಗಿಡಮರಗಳು, ಪಕ್ಷಿಗಳಿಂದ ಆವೃತ್ತವಾದ ಸುಂದರವಾದ ನೈಸರ್ಗಿಕ ವಾತಾವರಣದಲ್ಲಿರುವ ಚೆನ್ನೈ ಆಶ್ರಮದಲ್ಲಿ ಆಧ್ಯಾತ್ಮಿಕ ಸಾಧಕ ಬಂಧುಗಳಿಗಾಗಿ  ಕನ್ನಡದಲ್ಲಿ ವಿಶೇಷವಾಗಿ ಶಿಬಿರವನ್ನು (Retreat) ಏರ್ಪಡಿಸಲಾಗಿದೆ.

ಶಿಬಿರದಲ್ಲಿ ವೈ ಎಸ್ ಎಸ್ ಧ್ಯಾನತಂತ್ರಗಳನ್ನು  ಹೇಳಿಕೊಡುವುದರಿಂದ ಪುನರಾವಲೋಕನದ ದೃಷ್ಟಿಯಿಂದ ಸಾಧಕರಿಗೆ ಹಾಗೂ ವೈ ಎಸ್ ಎಸ್  ಪಾಠಗಳಿಗೆ ಹೊಸದಾಗಿ ಹೆಸರನ್ನು ನೋಂದಾಯಿಸಿರುವ ಭಕ್ತರಿಗೂ ಇದು ಉತ್ತಮ ಅವಕಾಶವಾಗಿರುತ್ತದೆ. 

ಶಿಬಿರದಲ್ಲಿ ಚೈತನ್ಯದಾಯಕ ವ್ಯಾಯಾಮ, ಧ್ಯಾನ, ಸತ್ಸಂಗ, ಧ್ಯಾನ ತಂತ್ರಗಳ ತರಗತಿಗಳು, ವೈಯಕ್ತಿಕ ಸಮಾಲೋಚನೆ (counselling) ಒಳಗೊಂಡಂತೆ ವೈಯಕ್ತಿಕ ಸಾಧನೆಗಾಗಿ ಸಹ ವ್ಯವಸ್ಥೆ ಇರುತ್ತದೆ.  ಜೊತೆಗೆ ಭಜನ್ ಕಾರ್ಯಕ್ರಮ ಸಹ ಇರುತ್ತದೆ.
ಧ್ಯಾನ ಮಂದಿರ ಮತ್ತು ಇಬ್ಬರು ಸಾಧಕರಿಗೆ ಒಂದರಂತೆ ಸ್ನಾನಗೃಹ ಇರುವ ಕೊಠಡಿಗಳಿಗೂ ಸಹ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ.

ದಿನಾಂಕ:  ಏಪ್ರಿಲ್ 12 ಮತ್ತು 13- ಶನಿವಾರ ಮತ್ತು ಭಾನುವಾರ 
ಸ್ಥಳ: ಚೆನ್ನೈ ಆಶ್ರಮ.
ಶುಲ್ಕ: ಯಾವುದೇ ರೀತಿಯ ನೋಂದಣಿ ಶುಲ್ಕ ಇರುವುದಿಲ್ಲ. 

 ಮೊದಲು ಬಂದವರಿಗೆ ಆದ್ಯತೆ. ಆದ್ದರಿಂದ ಆದಷ್ಟು ಬೇಗ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಪ್ರಾರ್ಥನೆ. { ಪ್ರಯಾಣದ ಟಿಕೆಟ್ ಅನ್ನು ಮುಂಚಿತವಾಗಿ ಕಾಯ್ದಿರಿಸುವುದು ಅಪೇಕ್ಷಿತ}       

ಹೆಸರು ನೋಂದಾಯಿಸಲು ಸಹಾಯಕ್ಕಾಗಿ ಸಂಪರ್ಕಿಸಬೇಕಾದ ಸಂಖ್ಯೆ: 
 9591075339 - ಮೋಹನ ಗೋಪಿನಾಥ್ ಜಿ. 
9880628459 - ಸುಜಾತ ಶೆಟ್ಟಿ ಜಿ.

ವಿಶೇಷ ಸೂಚನೆ: ಈ ಶಿಬಿರಕ್ಕೆ ಎರಡು ದಿನ ಮೊದಲು ಬರಬಹುದು ಮತ್ತು ಶಿಬಿರದ ನಂತರ ಎರಡು ಮೂರು ದಿನ ಆಶ್ರಮದಲ್ಲಿ ಉಳಿಯಲು ಅವಕಾಶವಿದೆ.

ಸೇವಾಕಾಂಕ್ಷಿಗಳು

https://chennairetreat.ysskendra.org