ನಲ್ಮೆಯ ದಿವ್ಯ ಆತ್ಮಗಳೇ,
ಜೈ ಗುರುದೇವ
ನಮ್ಮ ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 2024ರಲ್ಲಿ ಆಯೋಜಿಸಲಾಗಿರುವ ವಿಶೇಷ ಧ್ಯಾನಗಳ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ನಮಗೆ ಬಹಳ ಸಂತೋಷವಾಗುತ್ತಿದೆ.
ಡಿಸೆಂಬರ್ 14, ಶನಿವಾರ: ಎರಡನೇ ಶನಿವಾರ – ದೀರ್ಘಾವಧಿಯ ಧ್ಯಾನ 2024 ಮಧ್ಯಾಹ್ನ 1ರಿಂದ ಸಂಜೆ 7ರ ವರೆಗೆ
*ಡಿಸೆಂಬರ್ 21, ಶನಿವಾರ: ಕ್ರಿಮಸ್‌ನ ಧ್ಯಾನ ಸಂಜೆ 5ರಿಂದ 7ರ ವರೆಗೆ
ಡಿಸೆಂಬರ್ 28, ಶನಿವಾರ: ಜನ್ಮೋತ್ಸವದ ದೀರ್ಘಾವಧಿಯ ಧ್ಯಾನ 2024 ಮಧ್ಯಾಹ್ನ 1ರಿಂದ ಸಂಜೆ 7ರ ವರೆಗೆ
ಡಿಸೆಂಬರ್ 31, ಮಂಗಳವಾರ: ಹೊಸ ವರ್ಷದ ಸಂಜೆಯ ಧ್ಯಾನ, ರಾತ್ರಿ 11.30ರಿಂದ ಬೆಳಿಗ್ಗೆ 12.30ರ ವರೆಗೆ.
ಈ ಎಲ್ಲ ಧ್ಯಾನಗಳಲ್ಲಿ ಭಾಗವಹಿಸಿ ಆನಂದ ಮತ್ತು ಆಶೀರ್ವಾದಗಳನ್ನು ಪಡೆಯಲು ಎಲ್ಲರನ್ನೂ ಸ್ವಾಗತಿಸುತ್ತಿದ್ದೇವೆ.
ಧನ್ಯವಾದಗಳು
ದಿವ್ಯ ಮಿತ್ರತ್ವದಲ್ಲಿ
ವೈಎಸ್‌ಡಿಕೆ ಬೆಂಗಳೂರು
“ಸಮೂಹ ಧ್ಯಾನವೆಂದರೆ ಹೊಸ ಆಧ್ಯಾತ್ಮಿಕ ಆಕಾಂಕ್ಷಿಗಳು ಹಾಗೂ ಅನುಭವಿ ಧ್ಯಾನಸ್ಥರನ್ನು ಸಂರಕ್ಷಿಸುವ ಒಂದು ಕೋಟೆಯಿದ್ದಂತೆ. ಒಟ್ಟುಗೂಡಿ ಧ್ಯಾನ ಮಾಡುವುದು ಎಂದರೆ ಸಮೂಹ ಆಕರ್ಷಣೆಯ ಅಗೋಚರ ಸ್ಪಂದನಗಳ ವಿನಿಮಯದ ಮೂಲಕ ಸಮೂಹದ ಪ್ರತಿಯೊಬ್ಬ ಸದಸ್ಯನ ಆತ್ಮ-ಸಾಕ್ಷಾತ್ಕಾರದ ಆರೋಹಣ.”