VERY IMPORTANT ANNOUNCEMENT / ಬಹು ಮುಖ್ಯವಾದ ಪ್ರಕಟಣೆ

YSS CIRCULAR – RANCHI

March 5, 2020

Dear Divine Atman, 

As you are all aware, corona virus has started to spread in India. We have consulted public health experts in this area, and they have strongly advised us to suspend all non-essential congregations. Keeping their advice in mind, and out of an abundance of caution and care, we deeply regret to inform you of the following decisions, which will be effective immediately and will remain operative until further notice: 

1.  All group meditations, satsangas, and other group activities at YSS Ashrams, Kendras, Mandalis, and Retreat Centers will not be held. We however encourage devotees to participate in online Group Meditations. A schedule of services is available on the SRF Online Meditation Center website - srfonlinemeditation.org/calendar 

2.  Special commemoration services for the Mahasamadhi anniversary of our Gurudeva Paramahansa Yogananda (March 7) and our Paramguru Swami Sri Yukteswar Giri (March 9) and YSS Foundation Day Anniversary (March 22) will not be held at YSS Ashrams, Kendras and Mandalis. We will post further information regarding this on our website - yssofindia.org. 

3.  All monastic tours planned during March 2020, including any public talks, have been cancelled. Please inform the same to all devotees and friends who are planning to attend these functions. 

4.  Sadhana Sangams scheduled for March 2020 at Ranchi, Noida, Dakshineswar and Igatpuri have been cancelled. Devotees who have registered for these events will be informed; they can choose to either transfer to another Sadhana Sangam (in July or later) or request a refund of their registration fee. We will continue to monitor the situation and take a suitable decision regarding the Sadhana Sangams to be held in April. We request those devotees who are planning to attend the Sadhana Sangam in April, to put their travel plans on hold until further notice. 

5.  Devotees are requested to cancel any travel plans they may have made to visit and stay during the month of March 2020 at any of YSS Ashrams and Retreat Centers.

Please share this important update with all devotees via notice boards, email, SMS and WhatsApp at the earliest, requesting them to join us in prayers for all humanity during this challenging period.

If devotees have any questions, they may contact 

YSS Center Dept., or YSS Ranchi Help Desk on 

6201394775, 6201395589, 9431917333/444/555 

(Mon-Sat: 9am to 4.30pm) 

Let us keep in mind these words of our Gurudeva: “Whatever it is that you fear, take your mind away from it and leave it to God. Have faith in Him…Every night, before you sleep, affirm: ‘The Heavenly Father is with me; I am protected.’ Mentally surround yourself with Spirit and His cosmic energy.” 

Gurudeva expected us to use practical outer means and commonsense methods to prevent illness, but he also urged us to have a positive attitude and faith in God’s love and protection. That inner attunement felt in meditation and prayer will allow us to reach into the infinite reservoir of God’s healing power to help ourselves and all those who are in need. 

May God and Guruji deeply bless and watch over you and your loved ones. 

In Guruji’s service, 
Center Department

_________

ಬಹು ಮುಖ್ಯವಾದ ಪ್ರಕಟಣೆ

ವೈಎಸ್ಎಸ್ಸುತ್ತೋಲೆ ರಾಂಚಿ
ಮಾರ್ಚ್‌
, ೨೦೨೦

ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಭಾರತದಲ್ಲೂ ಕೂಡ ಕರೊನಾ ವೈರಸ್‌ ಹರಡಲು ಆರಂಭವಾಗಿದೆ. ನಾವು ಈ ಕ್ಷೇತ್ರದ ಸಾರ್ವಜನಿಕ ಆರೋಗ್ಯ ವಿಶೇಷಜ್ಞರನ್ನು ಸಂಪರ್ಕಿಸಿದೆವು. ಅವರು ಜನ ಸೇರುವ ಎಲ್ಲ ಅನಿರ್ದಿಷ್ಟ ಕಾರ್ಯಕ್ರಮಗಳನ್ನು ರದ್ದು ಪಡಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಅವರ ಸಲಹೆಯ ಮೇರೆಗೆ ಮತ್ತು ಎಚ್ಚರಿಕೆ ಹಾಗೂ ಆರೋಗ್ಯದ ದೃಷ್ಟಿಯಿಂದ ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದಿದ್ದರಿಂದ ನಾವು ನಿಮಗಾದ ಅಡಚಣೆಗೆ ವಿಷಾದಿಸುತ್ತೇವೆ. ಮುಂದಿನ ಸೂಚನೆ ನೀಡುವವರೆಗೆ ಈ ಕೆಳಗಿನ ಸೂಚನೆಗಳು ತತ್‌ಕ್ಷಣಕ್ಕೆ ಜಾರಿಗೆ ಬರುತ್ತವೆ:

(೧)   ಇಂದಿನಿಂದ ಇಡೀ ಮಾರ್ಚ್‌ ತಿಂಗಳಲ್ಲಿ ನಮ್ಮ ಎಲ್ಲ ವೈಎಸ್‌ಎಸ್‌ ಆಶ್ರಮಗಳು, ಕೇಂದ್ರಗಳು, ಮಂಡಲಿಗಳಲ್ಲಿ ನಡೆಯುವ ಸಾಮೂಹಿಕ ಧ್ಯಾನಗಳು, ಸತ್ಸಂಗಗಳು ಮತ್ತು ಇತರ ಸಾಮೂಹಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಆದರೆ ಭಕ್ತಾದಿಗಳು srfonlinemeditation.org/calendar ವೆಬ್‌ಸೈಟ್‌ಗೆ ಹೋಗಿ ಸಾಮೂಹಿಕ ಧ್ಯಾನಗಳಲ್ಲಿ ಪಾಲ್ಗೊಳ್ಳಬೇಕೆಂದು ಇಚ್ಛಿಸುತ್ತೇವೆ.

(೨)   ಗುರುದೇವ ಪರಮಹಂಸ ಯೋಗಾನಂದರ ಮಹಾಸಮಾಧಿ (ಮಾರ್ಚ್‌ ೭) ಮತ್ತು ಪರಮಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರ ಮಹಾಸಮಾಧಿ (ಮಾರ್ಚ್‌ ೯) ಮತ್ತು ವೈಎಸ್‌ಎಸ್‌ ಸಂಸ್ಥಾಪನಾ ದಿನಾಚರಣೆ (ಮಾರ್ಚ್‌ ೨೨)ಯ ಕಾರ್ಯಕ್ರಮಗಳನ್ನು ವೈಎಸ್‌ಎಸ್‌ನ ಆಶ್ರಮಗಳಲ್ಲಿ, ಕೇಂದ್ರಗಳಲ್ಲಿ ಮತ್ತು ಮಂಡಲಿಗಳಲ್ಲಿ ಆಚರಿಸಲಾಗುವುದಿಲ್ಲ. ಈ ಕಾರ್ಯಕ್ರಮಗಳ ಬಗ್ಗೆಯ ಮುಂದಿನ ವಿವರಗಳನ್ನು ನಮ್ಮ ವೆಬ್‌ಸೈಟ್‌ yssofindia.org ಮೂಲಕ ಮುಂದೆ ತಿಳಿಸಲಾಗುತ್ತದೆ.

(೩)   ಮಾರ್ಚ್‌ ೨೦೨೦ರಲ್ಲಿ ಉದ್ದೇಶಿಸಲಾಗಿದ್ದ ಸನ್ಯಾಸಿಗಳ ಭೇಟಿಯನ್ನು, ಸಾರ್ವಜನಿಕ ಉಪನ್ಯಾಸಗಳೂ ಸೇರಿದಂತೆ, ರದ್ದು ಪಡಿಸಲಾಗಿದೆ. ದಯವಿಟ್ಟು ಈ ಕಾರ್ಯಕ್ರಮಗಳಿಗೆ ಬರಲಿಚ್ಛಿಸಿದ್ದ ಎಲ್ಲ ಭಕ್ತಾದಿಗಳಿಗೆ ಮತ್ತು ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಿ.

(೪)   ಮಾರ್ಚ್‌ ೨೦೨೦ರಲ್ಲಿ ರಾಂಚಿ, ನೊಯ್ಡಾ, ದಕ್ಷಿಣೇಶ್ವರ್‌ ಹಾಗೂ ಇಗತ್‌ಪುರಿಯಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಂಗಮಗಳನ್ನು ರದ್ದು ಪಡಿಸಲಾಗಿದೆ. ಈ ಸಂಗಮಗಳಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದ ಭಕ್ತಾದಿಗಳು ತಮ್ಮ ನೋಂದಣಿಯನ್ನು ಬೇರೊಂದು ಸಾಧನಾ ಸಂಗಮಕ್ಕೆ (ಜುಲೈ ೨೦೨೦ರ ನಂತರ ನಡೆಯುವ) ತಮ್ಮ ನೋಂದಣಿಯನ್ನು ವರ್ಗಾಯಿಸಬಹುದು ಅಥವಾ ನೋಂದಣಿ ಶುಲ್ಕವನ್ನು ಹಿಂಪಡೆಯಲು ಕೋರಿಕೊಳ್ಳಬಹುದು. ನಾವು ಪರಿಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ೨೦೨೦ರ ಏಪ್ರಿಲ್‌ನಲ್ಲಿ ನಡೆಯುವ ಸಾಧನಾ ಸಂಗಮಗಳು ಮತ್ತು ಇತರ ಕಾರ್ಯಕ್ರಮಗಳ ಬಗ್ಗೆ ಉಚಿತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಏಪ್ರಿಲ್‌ ೨೦೨೦ರ ಸಾಧನಾ ಸಂಗಮಕ್ಕೆ ನೋಂದಣಿ ಮಾಡಿಕೊಂಡಿರುವ ಭಕ್ತಾದಿಗಳು ನಾವು ಮುಂದಿನ ಮಾಹಿತಿ ನೀಡುವವರೆಗೂ ತಮ್ಮ ಪ್ರಯಾಣದ ಯೋಜನೆಯನ್ನು ತಡೆಹಿಡಿಯಬೇಕೆಂದು ಕೋರಿಕೊಳ್ಳುತ್ತೇವೆ.

(೫)   ಮಾರ್ಚ್‌ ೨೦೨೦ರಲ್ಲಿ ವೈಎಸ್‌ಎಸ್‌ ಆಶ್ರಮಗಳಿಗೆ ಬಂದು ಇರಲಿಚ್ಛಿಸಿದ್ದ ಎಲ್ಲ ಭಕ್ತಾದಿಗಳು ತಮ್ಮ ಪ್ರಯಾಣದ ಯೋಜನೆಯನ್ನು ರದ್ದು ಪಡಿಸಬೇಕೆಂದು ಕೇಳಿಕೊಳ್ಳುತ್ತೇವೆ.

ಈ ಮುಖ್ಯ ಸೂಚನೆಯನ್ನು ಎಲ್ಲ ಸೂಚನಾ ಫಲಕಗಳು, ಇ-ಮೇಲ್‌, ಎಸ್‌ಎಂಎಸ್‌ ಮತ್ತು ವಾಟ್ಸ್‌ಅಪ್‌ ಮೂಲಕ ಅತಿ ಶೀಘ್ರವಾಗಿ ಭಕ್ತಾದಿಗಳಿಗೆ ತಿಳಿಸಿ, ಈ ಗುರುತರ ಸಮಯದಲ್ಲಿ ಎಲ್ಲ ಮಾನವ ಜೀವಿಗಳ ಯೋಗಕ್ಷೇಮಕ್ಕಾಗಿ ನಮ್ಮೊಡನೆ ಸೇರಿ ಪ್ರಾರ್ಥಿಸುವಂತೆ ತಿಳಿಸಿ.

ಭಕ್ತಾದಿಗಳಿಗೆ ಏನಾದರೂ ಪ್ರಶ್ನೆಯಿದ್ದಲ್ಲಿ ವೈಎಸ್‌ಎಸ್‌ ಕೇಂದ್ರ ಇಲಾಖೆ ಅಥವಾ ವೈಎಸ್‌ಎಸ್‌ ರಾಂಚಿ ಸಹಾಯಕ ಕಕ್ಷೆಗೆ ಈ ಕೆಳಗಿನ ನಂಬರ್‌ಗಳಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು:

೬೨೦೧೩೯೪೭೭೫, ೬೨೦೧೩೯೫೫೮೯
೯೪೩೧೯೧೭೩೩೩/೪೪೪/೫೫೫
(ಸೋಮವಾರದಿಂದ ಶನಿವಾರ – ಬೆಳಿಗ್ಗೆ ೯ರಿಂದ ಸಂಜೆ ೪.೩೦ರ ವರೆಗೆ)

ನಮ್ಮ ಗುರುದೇವರ ಈ ಮಾತುಗಳನ್ನು ನಮ್ಮ ಮನದಲ್ಲಿಟ್ಟುಕೊಳ್ಳೋಣ: “ನಿಮಗೆ ಯಾವುದರ ಬಗ್ಗೆಯಾದರೂ ಭಯವಿದ್ದಲ್ಲಿ ನಿಮ್ಮ ಮನಸ್ಸನ್ನು ಅದರಿಂದ ದೂರ ಸರಿಸಿ ಅದನ್ನು ದೇವರಿಗೆ ಸಮರ್ಪಿಸಿಬಿಡಿ”. ಅವನಲ್ಲಿ ನಂಬಿಕೆ ಇರಲಿ.... ಪ್ರತಿ ದಿನ ರಾತ್ರಿ ನಿದ್ದೆಗೆ ಜಾರುವ ಮುನ ದೃಢೀಕರಿಸಿ: “ದೇವಲೋಕದಲ್ಲಿರುವ ಭಗವಂತ ನನ್ನೊಡನಿದ್ದಾನೆ; ನಾನು ಸುರಕ್ಷಿತವಾಗಿದ್ದೇನೆ”. ಮನಃಪೂರ್ವಕವಾಗಿ ಅವನ ಚೇತನ ಮತ್ತು ಬ್ರಹ್ಮಾಂಡ ಚೈತನ್ಯದಿಂದ ನಿಮ್ಮನ್ನು ನೀವು ತುಂಬಿಕೊಳ್ಳಿ.

ಅನಾರೋಗ್ಯಕ್ಕೀಡಾಗದಂತೆ ನೋಡಿಕೊಳ್ಳಲು ನಾವು ಕಾರ್ಯೋಪಯೋಗಿ ಬಾಹ್ಯ ವಿಧಾನಗಳು ಹಾಗೂ ಸಾಮಾನ್ಯ ಜ್ಞಾನವನ್ನು ಉಪಯೋಗಿಸಬೇಕು ಎಂದು ಗುರುದೇವರು ಬಯಸಿದ್ದರು, ಆದರೆ ನಾವು ಸಕಾರಾತ್ಮಕ ಮನೋಧರ್ಮ ಮತ್ತು ದೇವರ ಪ್ರೇಮ ಮತ್ತು ಸಂರಕ್ಷಣೆಯ ಮೇಲೆ ನಂಬಿಕೆ ಹೊಂದಿರಬೇಕೆಂದೂ ಹೇಳಿದ್ದಾರೆ. ಧ್ಯಾನದಲ್ಲಿ ಮತ್ತು ಪ್ರಾರ್ಥನೆಯಲ್ಲಿ ಲಭಿಸುವ ಆಂತರಿಕ ಸಂಯೋಗ, ನಮಗೆ ಮತ್ತು ಯಾರೆಲ್ಲರಿಗೂ ಅವಶ್ಯಕತೆ ಇದೆಯೋ ಅವರೆಲ್ಲರಿಗೂ ಸಹಾಯವಾಗಲು ದೇವರ ಉಪಶಮನ ಶಕ್ತಿಯ ಎಲ್ಲೆ ಇಲ್ಲದ ಸಾಗರವನ್ನು ಸೇರುವಂತೆ ಮಾಡುತ್ತದೆ.

ಭಗವಂತ ಮತ್ತು ಗುರುಗಳು ನಿಮ್ಮಲ್ಲೆರನ್ನೂ ಸದಾ ಅನುಗ್ರಹಿಸಲಿ ಮತ್ತು ನಿಮ್ಮನ್ನು, ನಿಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಲಿ.

ಗುರುಗಳ ಸೇವೆಯಲ್ಲಿ
ಕೇಂದ್ರ ಇಲಾಖೆ - ರಾಂಚಿ