ಬೆಂಗಳೂರಿನ ವೈಎಸ್‌ಎಸ್‌ ಧ್ಯಾನ ಕೇಂದ್ರ ನವೆಂಬರ್‌ 10ರಂದು ಸ್ವಾಮಿ ಶ್ರೀ ಚಿದಾನಂದ ಗಿರಿಯವರ ಪ್ರವಚನವನ್ನು ನೇರ

ನವೆಂಬರ್‌ 10ರಂದು ಸ್ವಾಮಿ ಶ್ರೀ ಚಿದಾನಂದ ಗಿರಿಯವರು ಮುಂಬೈನಲ್ಲಿ ಮಾಡಿದ ಪ್ರವಚನವನ್ನು ಬೆಂಗಳೂರಿನ ಕೇಂದ್ರ ನೇರ ಪ್ರಸಾರ ಮಾಡಿತು. ಈ ಮನಸೆಳೆವ ಪ್ರವಚನವನ್ನು ಮಂದಿರದ ಎರಡೂ ಸಭಾಂಗಣದಲ್ಲಿ ನೆರೆದ 15 ಮಕ್ಕಳೂ ಸೇರಿದಂತೆ 150ಕ್ಕೂ ಹೆಚ್ಚು ಭಕ್ತಾದಿಗಳು ನೋಡಿ ಕೇಳಿ ಆನಂದಿಸಿದರು. ಅವರ ಪ್ರವಚನ ಅನುಭವಾತ್ಮಕ ಮತ್ತು ಸ್ಫೂರ್ತಿದಾಯಕವಾಗಿತ್ತು. ಈ ಪ್ರವಚನ ಭಕ್ತಾದಿಗಳಿಗೆ ಕೇವಲ ಆಧ್ಯಾತ್ಮಿಕ ಸೂತ್ರಗಳನ್ನು ಮಾತ್ರ ತಿಳಿಸುವುದಾಗಿರದೆ, ಕಾರ್ಯೋಪಯೋಗಿ ಸಲಹೆಗಳನ್ನು ನೀಡುವುದರ ಜೊತೆಗೆ ಒಂದು ಪರಿವರ್ತನೆಯ ಅನುಭವಕ್ಕೆ ಎಳೆದೊಯ್ದಿತು.

      ಸ್ವಾಮೀಜಿ ದಿವ್ಯಾತ್ಮರ ಆತ್ಮವನ್ನು ಪರಿಶುದ್ಧಗೊಳಿಸುವ ಬೆಳಕಿನ ಮೇಲೆ ಕೇಂದ್ರೀಕರಿಸುತ್ತ ತಮ್ಮ ಆತ್ಮವನ್ನು ಕಲಕುವ ಆವಹನಾತ್ಮಕ ಸತ್ಸಂಗದಿಂದ ಭಕ್ತಾದಿಗಳನ್ನು ಭಗವಂತ ಮತ್ತು ಗುರುಗಳ ಸಮೀಪಕ್ಕೆ ಕೊಂಡೊಯ್ದರು. ನಂತರ ಆ ಬೆಳಕಿನದಲ್ಲಿ ಪ್ರೇಮ ಮತ್ತು ಪರಿಜ್ಞಾನವನ್ನು ಓಂನ ಬ್ರಹ್ಮಾಂಡ ಕಂಪನದೊಂದಿಗೆ ಶರೀರ, ಮನಸ್ಸು ಮತ್ತು ಆತ್ಮಗಳೊಳಗೆ ಬೆಳಗಲು ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಟ್ಟರು. ಸ್ವಾಮಿಜಿ ಸಾಮೂಹಿಕ ಧ್ಯಾನದ ಶಕ್ತಿಯನ್ನು ವಿವರಿಸುತ್ತಾ ಅದರ ಶಕ್ತಿ ಹೇಗೆ ಧ್ಯಾನಿಗಳ ನಡುವೆ ಒಂದು ಗಾಢವಾದ ಬಾಂಧವ್ಯವನ್ನು ಸೃಷ್ಟಿಸುತ್ತದೆ ಮತ್ತು ಪ್ರೇಮದ ಸ್ಪಂದನ ಮತ್ತು ಜಗತ್ತಿನಲ್ಲಿ ಶಾಂತಿ ಹರಡುವಂತೆ ಮಾಡುತ್ತದೆ ಎನ್ನುವುದನ್ನೂ ತಿಳಿಸಿಕೊಟ್ಟರು.

Livestream of Satsanga being viewed in the main mandir 

     ಸ್ವಾಮೀಜಿ, ಪ್ರಾಣಾಯಾಮ ಮತ್ತು ಕ್ರಿಯಾ ಯೋಗ ನರವ್ಯೂಹದ ಮೇಲೆ ನಿಯಂತ್ರಣೆಯನ್ನು ಸಾಧಿಸಲು ಹೇಗೆ ನೆರವಾಗುತ್ತದೆ ಎಂದು ತಿಳಿಸಿ ಹೇಳಿದರು. ಅವರು ಅದನ್ನು ಆತ್ಮ ಮತ್ತು ಸಂವೇದನಾತ್ಮಕ ಜಗತ್ತಿನ ನಡುವಿನ ಒಂದು ಅಂತರಕ್ರಿಯೆಗೆ ಹೋಲಿಸಿದರು. ಅದು ಹೇಗೆ ಆತ್ಮ/ದಿವ್ಯಪ್ರಜ್ಞೆಗೆ ಒಂದು ಪೋರ್ಟಲ್‌ ಅಥವಾ ಒಂದು ತಡೆಯಾಗಬಹುದು ಎಂದು ವಿವರಿಸುತ್ತಾ ಭಕ್ತಾದಿಗಳಿಗೆ ಮಾಯೆಯ ಇಂದ್ರಿಯಗಳ ನಂಜಿನ ತಡೆಗೋಡೆಗೆ ಪ್ರತಿದಿನ ಗುರಿಯಾಗುವ ಆ ವಾಹಕದ ಮೇಲೆ ಪ್ರಜ್ಞಾಪೂರ್ವಕ ನಿಯಂತ್ರಣೆಯನ್ನು ಸಾಧಿಸಲು ಪ್ರೇರೇಪಿಸಿದರು.

      ಶ್ರೀ ಚಿದಾನಂದಜೀ ಮಿದುಳಿನಿಂದ ಶರೀರಕ್ಕೆ ಪ್ರವಹಿಸುವ ಶಕ್ತಿಯನ್ನು ನೀಡುವ ಪ್ರಾಣಾಯಾಮವನ್ನು ಉದ್ವೇಗಗಳನ್ನು ಹೊರದೂಡಲು ಹೇಗೆ ಉಪಯೋಗಿಸಬಹದು ಎನ್ನುವುದನ್ನು ವಿವರಿಸಿದರು. ಅವರು ಭಕಾದಿಗಳಿಗೆ ಒಂದು ಸಂಕ್ಷಿಪ್ತ ಪ್ರಾಣಾಯಾಮ ತಂತ್ರವನ್ನು ಅಭ್ಯಾಸ ಮಾಡಿಸುತ್ತಾ, ಒಬ್ಬರ ಪ್ರಜ್ಞೆಯನ್ನು ಆಂತರಿಕಗೊಳಿಸಿ ಮನಸ್ಸನ್ನು ಸ್ಥಿರಗೊಳಿಸಿ ಉದ್ವೇಗಗಳನ್ನು ತಡೆಯಲು  ಈ ಅಭ್ಯಾಸವನ್ನು ಹೇಗೆ ಉಪಯೋಗಿಸಬಹುದು ಎಂದು ವಿವರಸಿದರು.

      ಸ್ವಾಮೀಜಿ, ಬಾಹ್ಯ ಸ್ಥಿರೀಕರಣದ ಮೇಲೆ ಗಮನ ಹರಿಸುವ ಸಮಾಜದ ಕಾರಣದಿಂದಾಗಿ ಇಂದಿನ ಯುವ ಪೀಳಿಗೆ ತಮ್ಮ ಸ್ವಾಭಿಮಾನಕ್ಕಾಗಿ ಎಷ್ಟು ಹೆಣಗಾಡುತ್ತಿದ್ದಾರೆ ಮತ್ತು ಜನರು ತಮ್ಮನ್ನು ತಾವು ಪ್ರೀತಿಸದೆ ಹೇಗೆ ಬೇಕು-ಬೇಡಗಳ ಹಿಂದೆ ಅಲೆಯುತ್ತಿದ್ದಾರೆ ಎನ್ನುವುದನ್ನು ನೋಡಿ ತಮಗೆಷ್ಟು ನೋವಾಗುತ್ತಿದೆ ಎಂದು ಭಕ್ತಾದಿಗಳ ಜೊತೆ ತಮ್ಮ ನೋವನ್ನು ಹಂಚಿಕೊಂಡರು.  ಆಂತರ್ಯದೊಳಗೆ ಹೋಗಿ ನಮ್ಮ ಮೌಲ್ಯವನ್ನು ತಿಳಿದು ಪ್ರತಿದಿನ ಭಗವಂತನ ಆನಂದದ ಚಿಲುಮೆಯಿಂದ ಅಮೃತವನ್ನು ಸವಿಯಬೇಕು ಎಂದು ಹೇಳಿದರು. ಜೀವನದ ಸವಾಲುಗಳನ್ನು ಎದುರಿಸಲು ಬೇಕಾದ ಸ್ವಯಂ-ಪ್ರೇಮ ಮತ್ತು ಧೈರ್ಯವನ್ನು ಬೆಳೆಸಿಕೊಳ್ಳಲು ಯೋಗವನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳಿ ಎಂದು ಹೇಳಿದರು.

      ಸ್ವಾಮೀಜಿ ತಮ್ಮ ಸತ್ಸಂಗವನ್ನು ಮುಗಿಸುತ್ತಾ, ಅವರು ತಮ್ಮ ಪ್ರವಚನದಲ್ಲಿ ಮೊದಲು ಉಲ್ಲೇಖಿಸಿದ್ದ ಮಾನವ ಜೀವಿಗಳ ಅಪಾರ ಶಕ್ತಿ ಮತ್ತು ಸಾಮರ್ಥ್ಯವನ್ನು ಮತ್ತೆ ಉಲ್ಲೇಖಿಸುತ್ತಾ ಜನರು ತಮ್ಮ ಭೂಮಿಯ ಮೇಲಿನ ಸಂಗ್ರಾಮದಲ್ಲಿ ಅವುಗಳನ್ನು ಕಡಿಮೆ ಅಥವಾ ಹೆಚ್ಚು ಪ್ರಮಾಣದಲ್ಲಿ ಅಭಿವ್ಯಕ್ತಿಗೊಳಿಸುತ್ತಾರೆ ಎಂದು ಹೇಳಿದರು. ಕೊನೆಯಲ್ಲಿ ಅವರು ಗುರುಗಳ ಕವನ “ನೋಬಲ್‌ ನ್ಯೂ”ವನ್ನು ಪಠಿಸುತ್ತಾ ಭಕ್ತಾದಿಗಳಿಗೆ ಭಗವಂತನ ಮತ್ತು ಗುರುವಿಗೆ ತೋರುವ ತಮ್ಮ ಪ್ರೇಮದಿಂದ ಅಂತರಿಕ್ಷವನ್ನು ಕಡೆಯುವಂತೆ ಪ್ರೋತ್ಸಾಹಿಸುತ್ತಾ ತಮ್ಮ ಜೀವನದಲ್ಲಿ ಭಗವಂತನ ದಿವ್ಯಜ್ಯೋತಿಯನ್ನು ಅಭಿವ್ಯಕ್ತಿಗೊಳಿಸಲು ಎಂದೆಂದೂ ಇಲ್ಲದ ಭಕ್ತಿ ಮತ್ತು ಗುಂಡಿಗೆಯನ್ನು ಅಭಿವ್ಯಕ್ತಿಗೊಳಿಸಲು ಉತ್ತೇಜಿಸಿದರು.

      ಈ ಸತ್ಸಂಗದ ಮೂಲಕ ಭಕ್ತಾದಿಗಳಿಗೆ ಆದಿ ಶಂಕರಾಚಾರ್ಯರ ಭಜಗೋವಿಂದಂ, ಶ್ಲೋಕ 4ರ ಒಂದು ಮಿನುಗುನೋಟವನ್ನು ನೀಡಲಾಯಿತು. ಸ್ವಾಮಿ ಶ್ರೀ ಯುಕ್ತೇಶ್ವರರು ತಮ್ಮ “ಹೋಲಿ ಸೈನ್ಸ್‌” ಪುಸ್ತಕದ ಕೊನೆಯಲ್ಲಿ, “ದಿವ್ಯ ಪುರುಷರ ಸಂಗದ ಒಂದು ಕ್ಷಣಿಕ ಸಮಯ ಕೂಡ ನಮ್ಮನ್ನು ರಕ್ಷಿಸಿ ವಿಮೋಚನೆಗೊಳಿಸಬಲ್ಲದು” ಎಂದು ಈ ಶ್ಲೋಕವನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.

ಜೈಗುರು

ದಿವ್ಯ ಬಾಂಧವ್ಯದಲ್ಲಿ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಬೆಂಗಳೂರು